Tuesday 17 October 2017

ಕನ್ನಡ ಕವನ 'ಮರಳಲ್ಲಿ ಮುರಳಿ '

ಮರಳಲಿ ಮುರಳಿ

ಮರಳಲಿ ಮೂಡಿಹ ಮುರಳಿಯ 
ಮಧುರವಾದ ಜೋಗುಳ.
ಮರಳಿ ತೋರಿ ನಂದಗೋಕುಲವ;
ಮಾಧವ ಕರೆದಿಹ ಗೋವುಗಳ.

ಮರಳಲ್ಲವೋ ಇದು ಮರುಳ,
ದ್ವಾಪರದ ತಿರುಳೋ;
ಮರಳಿ ಕಲಿಯುಗಕೆ ಬಂದಿಹ
ಮುಕುಂದನ ಮೋಡಿಗಳೋ.

ಮರಳೇ ನೀನು ಮರಳದಿರು,
ಸಾಗರನಲಿ ಸೇರದಿರು.
ಮತ್ತೆ ಬೃಂದಾವನದ ತೆರದಿ
ಮೋಹನನ ತೋರುತಿರು.

ಮರಳ ಕಣಕಣದಿ ಕಂಡಿದೆ 
ಮನ್ವಂತರದ ಕುರುಹು.
ಮರಳಿ ಅಲೆ ದಡವೇರದೆ?
   ಮರಳುಗಾರ ನೀ ಅರುಹು.
👁()👁
ತ್ರಿನೇತ್ರಜ.

ಶಿವಕುಮಾರ.ಹಿರೇಮಠ.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.



No comments:

Post a Comment